Sudha Bangera

Sudhaಸುಧಾ ಬಂಗೇರ – ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಇವರು ಶಾಲಾ ದಿನಗಳಿಂದಲೂ ಭಾಷಣ, ಪ್ರಬಂಧ ಮುಂತಾದವುಗಳಲ್ಲಿ ಭಾಗವಹಿಸುತ್ತಾ, ಕಾದಂಬರಿ, ಸಾಪ್ತಾಹಿಕ, ಮಾಸಿಕ ಹೀಗೆ ಪುಸ್ತಕಗಳನ್ನು ಓದುವುದರಲ್ಲಿ ಅತೀವವಾಗಿ ತೊಡಗಿಸಿಕೊಳ್ಳುತ್ತಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿರುವ ಇವರು ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದು ಐಟಿ ಸಂಸ್ಥೆಗಳಲ್ಲಿ. ಹೀಗೆ ಯಾವುದೇ ಒಂದು ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸದ ಅವರು, ಎಲ್ಲವನ್ನೂ ತಿಳಿದುಕೊಳ್ಳುವ ಹುಮ್ಮಸ್ಸನ್ನು ಹೊಂದಿದ್ದರು. ಬಾಲ್ಯದಿಂದಲೂ ದಿನಪತ್ರಿಕೆ, ಸಾಪ್ತಾಹಿಕಗಳಲ್ಲಿ ದಿನ ಭವಿಷ್ಯ, ವಾರ ಭವಿಷ್ಯ ಓದುವ ಅಭ್ಯಾಸ ರೂಢಿಸಿಕೊಂಡಿದ್ದ ಅವರು ಅದರ ವೈಜ್ಞಾನಿಕ ಅನ್ವೇಷಣೆಯಲ್ಲಿ ಆಸಕ್ತಿ ಹೊಂದಿದ್ದರು. ನಾವು ನೋಡದ ಇನ್ನೊಂದು ಪ್ರಪಂಚವಾದ ಸೌರವ್ಯೂಹದ ಘಟನೆಗಳು ಮನುಷ್ಯನ ಜೀವನದ ಮೇಲೆ ಅದು  ಹೇಗೆ ಪರಿಣಾಮ ಬೀರುತ್ತದೆ ಎಂಬ ಕುತೂಹಲದ ಜೊತೆಗೆ, ಗ್ರಹಗಳು, ನಕ್ಷತ್ರ ಪುಂಜಗಳು, ಅವುಗಳ ಸಂಚಾರ, ಗ್ರಹಣ ಇತ್ಯಾದಿಗಳನ್ನು ತಿಳಿದುಕೊಳ್ಳಲು ಅವರು ಉತ್ಸುಕರಾಗಿದ್ದರು. ಆಸ್ಟ್ರೋಸೇಜ್’ನ ಉದ್ಯೋಗಿಯಾದ ಬಳಿಕ ಅವರ ಈ ಎಲ್ಲಾ ಪ್ರಶ್ನೆ, ಸಂದೇಹಗಳಿಗೆ ಒಂದೊಂದಾಗಿ ಉತ್ತರ ದೊರಕುತ್ತಾ, ಅವರು ಜಾತಕ, ಭವಿಷ್ಯದ ಬರವಣಿಗೆಯಲ್ಲಿ ಪರಿಣಿತರಾಗುತ್ತಾ ಸಾಗುತ್ತಿದ್ದಾರೆ.